ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವವರ ಮತ್ತು ಟೀಕಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನಂತೂ ಈಗ ಚುನಾವಣಾ ವರ್ಷ ಕೇಳಬೇಕಾ.. ಈ ಪಟ್ಟಿಗೆ ರಾಜ್ಯದ ಪ್ರಮುಖ ಕಾಂಗ್ರೆಸ್ ಮುಖಂಡರ ಹೆಸರೊಂದು ಸೇರ್ಪಡೆಯಾಗಿದೆ. ಮೋದಿಯವರ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಮಾಜಿ ವಸತಿ ಸಚಿವ, ಹಾಲೀ ಕಾಂಗ್ರೆಸ್ ಶಾಸಕ ಅಂಬರೀಶ್ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ರಾಜ್ಯಕ್ಕೆ ಒಂದು ನಿಯಮ ಇನ್ನೊಂದು ರಾಜ್ಯಕ್ಕೆ ಇನ್ನೊಂದು ನ್ಯಾಯ ಎನ್ನುವ ಕೇಂದ್ರ ಸರಕಾರದ ನಿಲುವು ತಪ್ಪಲ್ಲವೇ ಎಂದು ಅಂಬರೀಶ್ ಪ್ರಶ್ನಿಸಿದ್ದಾರೆ. ವಿರೋಧ ಪಕ್ಷದವರನ್ನು ಹೆಚ್ಚಾಗಿ ದೂರಲು ಹೋಗದ ಮತ್ತು ಇತ್ತೀಚಿನ ದಿನಗಳಲ್ಲಿ ಮಂಡ್ಯ ರಾಜಕಾರಣದತ್ತ ಹೆಚ್ಚು ಒಲವು ತೋರುತ್ತಿರುವ ಅಂಬರೀಶ್, ಕೆಲವೊಂದು ವಿದ್ಯಮಾನಗಳು ನನ್ನನ್ನು ಈ ರೀತಿ ಮಾತನಾಡುವಂತೆ ಮಾಡಿದೆ ಎಂದು ಅಂಬಿ ನೋವು ತೋಡಿಕೊಂಡಿದ್ದಾರೆ. ಶಾಸಕ ಅಂಬರೀಶ್, ಪ್ರಧಾನಿ ಮೋದಿಯವರನ್ನು ಕೇಳಿದ ಪ್ರಶ್ನೆ, ಹೀಗಿದೆ ನೋಡಿ